ಧಾರ್ಮಿಕ ಸುದ್ದಿ

" ರಾಖಿ ಬಂಧನದ ಮಹತ್ವ "

ಸುದ್ದಿ ಡೆಸ್ಕ್· 5 min read
" ರಾಖಿ ಬಂಧನದ ಮಹತ್ವ "

" ರಾಖಿ ಬಂಧನದ ಮಹತ್ವ "

ರಕ್ಷಾ ಬಂಧನಕ್ಕೆ ಸಂಬಂಧಿಸಿದಂತೆ ಪುರಾಣದಲ್ಲಿ ಹಲವು ಕಥೆಗಳು ಪ್ರಚಾರದಲ್ಲಿದೆ. ಅದರಲ್ಲಿ ಅತ್ಯಂತ ಪ್ರಸಿ ದ್ಧವಾದದ್ದು ಶ್ರೀಕೃಷ್ಣನೂ ದ್ರೌಪದಿಯೂ ನಡುವೆ ಇರುವ ಪ್ರೀತಿ ಸಂಬಂಧ. ಶ್ರೀಕೃಷ್ಣನಿಗೆ ದ್ರೌಪದಿಯು ತನ್ನ ಸೀರೆಯಂಚನ್ನು ಕತ್ತರಿಸಿ ಕಟ್ಟುವುದು ಮತ್ತು ಕೃಷ್ಣನು ಅವಳನ್ನು ರಕ್ಷಿಸುವುದು ಈ ಹಬ್ಬದ ಪೌರಾಣಿಕ ಹಿನ್ನೆಲೆಗಳಲ್ಲಿ ಒಂದಾಗಿದೆ.

R2.webp

ಸಭೆಯಲ್ಲಿ ದ್ರೌಪದಿ ಅವಮಾನಕ್ಕೊಳಗಾದಾಗ ಆಕೆಯ ಗೌರವವನ್ನು ಶ್ರೀಕೃಷ್ಣ ಪರಮಾತ್ಮ ಕಾಪಾಡಿದ ಎಂದು ಮಹಾಭಾರತ ಪರಂಪರೆ ಹೇಳುತ್ತದೆ. ದ್ರೌಪದಿ ಕಟ್ಟಿದ ಒಂದು ಸಣ್ಣ ಸೀರೆ ಅಂಚು ವಸ್ತ್ರಾಪಹರಣ ಸಮಯದಲ್ಲಿ ಶ್ರೀಕೃಷ್ಣ ಆಕೆಯ ಮಾನರಕ್ಷಣೆ ಮಾಡಿದ ಎಬುದನ್ನು ಸೂಚಿಸುತ್ತದೆ.

ಮತ್ತೊಂದು ಪ್ರಸಿದ್ಧವಾದ ಐತಿಹ್ಯವೂ ಇದೆ. ಇಂದ್ರನೂ ಇಂದ್ರಾಣಿಯೂ ಸಂಬಂಧಿಸಿದೆ. ದೇವಾಸುರಯುದ್ಧದಲ್ಲಿ ಇಂದ್ರನು ಅಪಾಯದಲ್ಲಿದ್ದ ಸಂದರ್ಭದಲ್ಲಿ ಇಂದ್ರಾಣಿ ಮಂತ್ರೋಚ್ಚಾರಣೆಯಲ್ಲಿ ಪವಿತ್ರವಾದ ರಕ್ಷಕ ಸೂತ್ರವನ್ನು ಸಿದ್ಧಪಡಿಸಿ ಇಂದ್ರನ ಕೈಯ್ಯಿಗೆ ಕಟ್ಟಿದಳು ಎಂದು ಪುರಾಣಕಥೆಯು ಹೇಳುತ್ತದೆ. ನಂತರ ಇಂದ್ರನಿಗೆ ಯುದ್ದದಲ್ಲಿ ವಿಜಯವೂ ದೊರೆಯಿತು ಎಂಬ ನಂಬಿಕೆಯಿದೆ..

R5.webp

ಪ್ರತಿ ಸಹೋದರಿಯು ಪ್ರತಿವರ್ಷ ತನ್ನ ಸಹೋದರರ ಮಣಿಕಟ್ಟಿನ ಮೇಲೆ ‘ರಾಖಿ ’ಎಂದು ಕರೆಯಲ್ಪಡುವ ಪವಿತ್ರ ದಾರವನ್ನು ಕಟ್ಟಲು ಕಾಯುತ್ತಾಳೆ. ಈ ದಿನ, ಸಹೋದರಿ ತನ್ನ ಸಹೋದರರ ಮಣಿಕಟ್ಟಿನ ಮೇಲೆ ಕಟ್ಟುವ ರೇಷ್ಮೆ ದಾರವು ಕೇವಲ ಒಂದು ದಾರವಲ್ಲ. ಅದು ಇಬ್ಬರ ನಡುವಿನ ಶುದ್ಧ, ಪವಿತ್ರ ಮತ್ತು ನಿರಂತರ ಪ್ರೀತಿಯ ಗುರುತು, ಜೊತೆಗೆ ಶಾಶ್ವತ ರಕ್ಷಣೆಗಾಗಿ ಮಂತ್ರದೊಂದಿಗೆ ಬೆರೆತಿದೆ.

ಈ ಆಚರಣೆ ಹೆಚ್ಚಾಗಿ ಉತ್ತರ ಭಾರತದಲ್ಲಿ ಪ್ರಚಲಿತವಿದೆ.... ಅದಕ್ಕೆ ಕಾರಣ, ಪರಕೀಯರು ಆಕ್ರಾಂತಾ ಮೇಲಿಂದ ಮೇಲೆ ದಾಳಿ ಮಾಡಿ ರಾಜ್ಯ ಗೆದ್ದರೆ...ಹೆಚ್ಚಾಗಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮತ್ತು ಲೂಟಿ

ಅದಕ್ಕಾಗಿ ಹೆಣ್ಣು ಮಕ್ಕಳನ್ನು ಕಾಪಾಡಲು ಸೋದರರು ತಮ್ಮ ಸೋದರಿಯರಿಂದ ರೇಷ್ಮೆ ದಾರದ " ರಾಖಿ" ಕಟ್ಟಿಸಿಕೊಂಡು ಅವರ " ರಕ್ಷಣೆ " ಯ ಭರವವಸೆಯಾಗಿತ್ತು, ಅದಕ್ಕೆ ವಿಶೇಷವಾಗಿ ರಜಪೂತರಲ್ಲಿ ಏಕೆಂದರೆ ಅವರು ಆಕ್ರಮಣ ಕಾರಿಗಳನ್ನು ಎದುರಿಸುವ ಧೈರ್ಯ ಅವರಲ್ಲಿತ್ತು... ಒಂದು ವೇಳೆ ಯುಧದಲ್ಲಿ ಅವರ ಪತಿ ಸೋತರೆ ರಾಣಿಯರು ಅಗ್ನಿಗಾಹುತಿ ಮಾಡಿಕೊಳ್ಳುವ " ಜೌಹರ" ಪದ್ಧತಿ ಇತ್ತು.

ಈಗಲು ರಾಜಸ್ಥಾನ ಮೂಲದ ಮಾರ್ವಾಡಿ ಸಮುದಾಯದರು ತಮ್ಮ ಗಂಡು ಮಕ್ಕಳ ಮದುವೆಯ ದಿಬ್ಬಣಗಳಲ್ಲಿ ಹೆಣ್ಣುಮಕ್ಕಳನ್ನು ಮನೆಯಲ್ಲಿಯೇ ಬಿಡುತ್ತಾರೆ... ಕಾರಣ ಪ್ರವಾಸದಲ್ಲಿ ಆಕ್ರಾಂತಾ ಅವರ ಆಕ್ರಮಣದ ಭೀತಿ....

ಒಟ್ಟಿನಲ್ಲಿ ಇವೆಲ್ಲ ಕಾರಣಗಳಿಂದ " ಹೆಣ್ಣುಮಕ್ಕಳ " ರಕ್ಷಣೆ ಕೊಡುವ ಈ " ರಾಖಿ" ಪದ್ಧತಿ ಪ್ರಚಲಿತಲ್ಲಿ ಇನ್ನೂ ಇದೆ..."

ಈಗ ಭಾರತಾದ್ಯಂತ ಆಚರಿಸಲಾಗುವುದು

Comments

Leave a comment

Recommended Reading